S.N.M. PLYTECHNIC | KAUSHALYAM 2018

KAUSHALYAM 2018

ಮೂಡಬಿದ್ರೆಯ ಎಸ್. ಎನ್. ಮೂಡಬಿದ್ರಿ ಪಾಲಿಟೆಕ್ನಿಕ್ ನ ಇನ್ನೊವೇಶನ್ ಕ್ಲಬ್ ನ ಆಶ್ರಯದಲ್ಲಿ ತಾಂತ್ರಿಕ ಮಾದರಿಗಳ ಪ್ರದರ್ಶನ ಕೌಶಲ್ಯಂ 2018 ಅನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾಲೇಜಿನ ಏಳು ವಿಭಾಗಗಳ   370 ವಿದ್ಯಾರ್ಥಿಗಳು 85 ವಿವಿಧ ರೀತಿಯ ತಾಂತ್ರಿಕ ಮಾದರಿಗಳನ್ನು ಪ್ರದರ್ಶಿಸಿದರು. ಆಸುಪಾಸಿನ ಹಲವು ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯಮಿಗಳು ಈ ಪ್ರದರ್ಶನವನ್ನು ವೀಕ್ಷಿಸಿ ವಿದ್ಯಾರ್ಥಿಗಳ ಪರಿಶ್ರಮವನ್ನು ಪ್ರಶಂಸಿಸಿದರು. ದಿನಾಂಕ 7-3-2018ರಂದು ನಡೆದ ಈ ತಾಂತ್ರಿಕ ಮಾದರಿ ಪ್ರದರ್ಶನದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಟೆಕ್ ಫೋರಮ್ ಸಂಘವು ಈ ವರ್ಷದ "ಮೋಸ್ಟ್ ಇನ್ನೊವೇಟಿವ್ ಕ್ಲಬ್" ಪ್ರಶಸ್ತಿ ಗೆ ಪಾತ್ರವಾಯಿತು. 

ವಸ್ತು ಸಾಗಾಣಿಕೆ ಅನುಕೂಲಕರವಾದ ನವೀನ ಮಾದರಿಯ ಬೈಕ್, ಮೊಬೈಲ್ ಟೀ ಅಂಗಡಿಯ ವ್ಯವಸ್ಥೆ ಹೊಂದಿರುವ ಬೈಕ್, ಸ್ವಚ್ಛ ಭಾರತ ಕಲ್ಪನೆ ಸಾಕಾರಗೊಳಿಸಲು ಉಪಯುಕ್ತವಾದ ಗ್ರೀನ್ ಸಿಟಿ ಮೊಬೈಲ್ ಆ್ಯಪ್, ರೈತರು ತಾವು ಬೆಳೆದ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟಮಾಡಲು ಆನ್ ಲೈನ್ ಸೌಲಭ್ಯ ಕಲ್ಪಿಸುವ ಮೊಬೈಲ್ ಆ್ಯಪ್, ಅಡಿಕೆ ಹಾಗೂ ತೆಂಗಿನ ಮರವೇರಿ ಕಾಯಿ ಕೊಯ್ಯುವ, ಮದ್ದು ಸಿಂಪಡಿಸುವ ವಿನೂತನ ಮಾದರಿ ಯಂತ್ರ,, ಗೊಂಚಲಿನಿಂದ ವೇಗವಾಗಿ ಅಡಿಕೆ ಬೇರ್ಪಡಿಸುವ ಯಂತ್ರ, ಮೋರಿಗಳಲ್ಲಿ ತುಂಬಿದ ಕಸ ಕಡ್ಡಿಗಳನ್ನು ತೆಗೆದು ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವ ಯಂತ್ರ,  ಕೇವಲ ಓರ್ವ ಸಿಬ್ಬಂದಿಯೇ ಸಂಪೂರ್ಣ ಮತದಾನ ಪ್ರಕ್ರಿಯೆ ನಿರ್ವಹಿಸಬಲ್ಲ ಅತ್ಯಂತ ಸುರಕ್ಷಿತ ಮತದಾನಕ್ಕೆ ಅನುವು ಮಾಡಬಲ್ಲ ವಿನೂತನ ವೋಟಿಂಗ್ ಯಂತ್ರ, ಟ್ರಾಫಿಕ್ ಸಮಸ್ಯೆಯಿಲ್ಲದೆ ರೋಗಿಗೆ ತುರ್ತು ಚಿಕಿತ್ಸೆ ಯ ಸೌಲಭ್ಯ ಒದಗಿಸಬಲ್ಲ ಸ್ಮಾರ್ಟ್ ಆ್ಯಂಬುಲೆನ್ಸ್, ಆನ್ಲೈನ್ ನಲ್ಲಿ ವೈದ್ಯಕೀಯ ನೆರವು ಹಾಗೂ ಔಷಧಿಗಳ ಸೌಲಭ್ಯ ಒದಗಿಸಬಲ್ಲ ಆ್ಯಪ್, ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಲ್ಲ ಸ್ವಯಂಚಾಲಿತ ಬ್ಯಾರಿಕೇಡ್ ವ್ಯವಸ್ಥೆ, ಕಟ್ಟಡಗಳಲ್ಲಿ ವಿದ್ಯುತ್ ಬಳಕೆ ಕಡಿಮೆ ಮಾಡಲು ಆಪ್ಟಿಕಲ್ ಫೈಬರ್ ಅಳವಡಿಸಿದ ಗೋಡಗಳ ನಿರ್ಮಾಣ, ಕಟ್ಟಡ ನಿರ್ಮಾಣ ವೆಚ್ಚ ತಗ್ಗಿಸಬಲ್ಲ ಅನೇಕ ಮಾದರಿಗಳು ಹೀಗೆ ವಿನೂತನ ತಂತ್ರಜ್ಞಾನದ ಬಳಕೆಯ ವಿದ್ಯಾರ್ಥಿಗಳು ತಯಾರಿಸಿದ ಅನೇಕ ಮಾದರಿಗಳು ಜನನ ಮನ ಸೆಳೆದವು.  ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಸುರೇಶ್ ಪಿ. ಎಸ್ ಹಾಗೂ ಕೆಪಿಟಿಯ ಇಲೆಕ್ಟ್ರಾನಿಕ್ ಸ್ ವಿಭಾಗದ ಮುಖ್ಯಸ್ಥರಾದ ಸತೀಶ್ ಕೆ. ಎಮ್. ತೀರ್ಪುಗಾರರಾಗಿ ಸಹಕರಿಸಿದರು.