S.N.M. PLYTECHNIC | Project to build 300mts Katta across Phalguni river, near Hosangadi, Moodbidri on 6th January 2019

Project to build 300mts Katta across Phalguni river, near Hosangadi, Moodbidri on 6th January 2019

Project to build 300mts Katta across Phalguni river, near Hosangadi, Moodbidri on 6th January 2019

 The quote “water is the new oil” best fits the current water crisis. Fresh water is being withdrawn from surface water sources and ground water aquifers at rates faster than replenishment or recharge.

Fresh water is essential to life, and yet we are using it faster than it can be replenished. Ground water levels are depleting on a day to day basis. As the water consumption increases it is important to adequately recharge aquifers in order to maintain the ground water levels. Water awareness campaign to educate our staff and students is effectively done every year in our Polytechnic. As an extension of this awareness a project was taken up by our NSS unit to build a Katta (A dam built using sand and mud to store water for irrigation purposes and to replenish the ground water) across the river Phalguni, at a place called Thorpu near Hosangadi about 15 kms from our college. The project was intended to store flowing water for the irrigation purposes of local farmers. Besides this the stored water is expected to raise the depleted water table.

This project was implemented on 06th January 2019 in association with Rotary Club of Moodbidri and local villagers. About 110 NSS volunteers along with 8 faculty members joined to build the Katta of about 300mts length using around 3000 bags of sand. Mud was used to fill the gaps to prevent leakage of water. The work began at 9.30am and was completed at 5pm. Breakfast, Lunch and soft drinks were provided by Rotary Club Moodbidri and local villagers. The work was very much appreciated by the local village administration.

 

ಹರಿವ ನದಿಗೆ ಪಾರಂಪರಿಕ ಕಟ್ಟ ಕಟ್ಟಿದ ಎನ್.ಎಸ್.ಎಸ್. ವಿದ್ಯಾರ್ಥಿಗಳು

ಮೂಡಬಿದಿರೆಯ ಎಸ್.ಎನ್.ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್.ಘಟಕ , ರೋಟರಿ ಕ್ಲಬ್ ಮೂಡಬಿದಿರೆ , ಹಾಗು ಹೊಸಂಗಡಿ ಗ್ರಾಮ ಪಂಚಾಯತ್ , ಹಾಗು ಊರಿನವರ ಸಹಭಾಗಿತ್ವದಲ್ಲಿ ಹೊಸಂಗಡಿ ಸಮೀಪದ ತೋರ್ಪು ಎಂಬಲ್ಲಿ  ’ಫಲ್ಗುಣಿ’ ನದಿಗೆ ಅಡ್ಡಲಾಗಿ ಸುಮಾರು 300 ಮೀಟರ್ ಉದ್ದದ ಪಾರಂಪರಿಕ ಕಟ್ಟವನ್ನು 06-01-2019 ರಂದು ಕಟ್ಟಲಾಯಿತು.

ಎಸ್.ಎನ್.ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್.ಎಸ್.ಎಸ್.ಘಟಕದ ಸುಮಾರು 110 ವಿದ್ಯಾರ್ಥಿಗಳು (25 ವಿದ್ಯಾರ್ಥಿನಿಯರೂ ಸೇರಿ) ರೋಟರಿ ಕ್ಲಬ್ ಸದಸ್ಯರು ಹಾಗು ಊರವರ ಜೊತೆ ಸೇರಿ ಸುಮಾರು 300 ಮೀಟರ್ ಉದ್ದದ ಕಟ್ಟವನ್ನು ಸುಮಾರು 3000 ಮರಳು ಚೀಲ ಹಾಗು ಮಣ್ಣಿನ ಸಹಾಯದಿಂದ ಕೇವಲ ಒಂದು ದಿನದಲ್ಲಿ ಮುಗಿಸಿದರು .

ಎನ್.ಎಸ್.ಎಸ್ ನ ದ್ಯೇಯ ವಾಕ್ಯ ’ನನಗಲ್ಲ ನಿನಗೆ’ ಎಂಬಂತೆ , ಹೊಸಂಗಡಿ ಹಾಗು ಸುತ್ತಮುತ್ತಲಿನ ಸುಮಾರು 6 ಕಿ.ಮೀ. ವ್ಯಾಪ್ತಿಯ ಜನತೆಯ ಕ್ರಷಿ ಚಟುವಟಿಕೆ , ಅಂತರ್ಜಲ ವ್ರದ್ದಿ , ಇನ್ನಿತರ ಚಟುವಟಿಕೆಗಳಿಗೆ ಉಪಕಾರಿಯಾಗುವ ಹಿನ್ನಲೆಯಲ್ಲಿ ಈ ಯೋಜನೆಯನ್ನು ಸಾಕಾರಗೊಳಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳು ಕಟ್ಟ ಕಟ್ಟುವ ಮೋಜಿನೊಂದಿಗೆ ಜಲಸಾಕ್ಷರತೆಯ, ಸೇವಾ ಮನೋಭಾವದ ಪಾಠವನ್ನು ಕಲಿತುಕೊಂಡರು.

ಈ ಯೋಜನೆಯ ನಿರ್ಮಾಣದ ಕನಸು ಹೊತ್ತವರು ಹೊಸಂಗಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಹರಿಪ್ರಸಾದ್ . ಈ ಕಾರ್ಯ ಯಶಸ್ವಿಯಾಗಲು ಹರಿಪ್ರಸಾದ್ ಇವರು ಮೂಡಬಿದಿರೆಯ ರೋಟರಿ ಕ್ಲಬ್ ನ ಡಾ| ಮುರಳೀಕ್ರಷ್ಣ ಅವರನ್ನು  ಸಂಪರ್ಕಿಸಿದಾಗ , ರೋಟರಿ ಕ್ಲಬ್ ಸದಸ್ಯರು ಸಹ ಈ ಯೋಜನೆಗೆ ಬೇಕಾದ ಎಲ್ಲಾ ರೀತಿಯ ಸಹಕಾರಕ್ಕೆ ಬೆನ್ನೆಲುಬಾಗಿ ನಿಂತರು . ನಂತರ ಮೂಡುಬಿದಿರೆಯ ಎಸ್.ಎನ್.ಎಮ್. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಜೆ.ಜೆ.ಪಿಂಟೋ ಇವರಲ್ಲಿ ವಿಷಯವನ್ನು ಹಂಚಿಕೊಂಡು ಅಲ್ಲಿನ ಎನ್.ಎಸ್.ಎಸ್.ಘಟಕ 1 ಹಾಗು ಘಟಕ 2 ರ ವಿದ್ಯಾರ್ಥಿ ಯುವಶಕ್ತಿಯ ಸಹಾಯದೊಂದಿಗೆ ,  ಹಮ್ಮಿಕೊಂಡ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು .

 ಜಿ.ಪಂ ಸದಸ್ಯರಾದ ಧರಣೇಂದ್ರ ಕುಮಾರ್ , ಗ್ರಾಮ ಪಂಚಾಯತ್ ಸದಸ್ಯರಾದ ಹರಿಪ್ರಸಾದ್ , ಪಂಚಾಯತ್ ಅಭಿವ್ರದ್ದಿ ಅಧಿಕಾರಿ ಗಣೇಶ್ ಶೆಟ್ಟಿ , ಊರಿನ  ಪ್ರಮುಖರಾದ ಪದ್ಮರಾಜ್ ಪೇರಿ ಮೊದಲಾದವರು ಹಾಜರಿದ್ದು ಮಾರ್ಗದರ್ಶನ ನೀಡಿದರು.

ರೋಟರಿ ಕ್ಲಬ್ ನ  ಡಾ| ರಮೇಶ್ , ಡಾ| ಮುರುಳೀಕ್ರಷ್ಣ , ಶ್ರೀಕಾಂತ್ ಕಾಮತ್ , ನಾರಾಯಣ ಪಿ.ಎಂ. ಸಿ.ಎಚ್.ಗಫೂರ್ , ಪಿ.ಕೆ.ಥಾಮಸ್ , ಜಯರಾಮ್ ಕೋಟ್ಯಾನ್ , ದಯಾನಂದ ಮಲ್ಯ , ಡಾ| ಅರವಿಂದ ಕಿಣಿ ,  ಡಾ| ಹರೀಶ್ ನಾಯಕ್ , ನಾಗರಾಜ್ , ಅಬ್ದುಲ್ ರವೂಫ್ , ಉದಯ್ ಕುಮಾರ್ , ಮಹಮ್ಮದ್ ಆರೀಫ್ , ಸಹನಾ ನಾಗರಾಜ್ ಉಪಸ್ಥಿತರಿದ್ದರು . 

ಎಸ್.ಎನ್.ಎಮ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಜೆ.ಜೆ.ಪಿಂಟೋ , ಎನ್.ಎಸ್.ಎಸ್. ಘಟಕ 1 ರ ಕಾರ್ಯಕ್ರಮಾಧಿಕಾರಿ ರಾಮ್ ಪ್ರಸಾದ್ , ಘಟಕ 2 ರ ಕಾರ್ಯಕ್ರಮಾಧಿಕಾರಿ ಕಿರಣ್ , ಉಪನ್ಯಾಸಕರಾದ ಶ್ರೀಮತಿ ನೊರೋನ್ಹ ತರೀನಾ ರೀಟಾ , ಸುಧೀರಾಜ್ , ವರುಣ್ ಕುಮಾರ್ , ರವಳನಾಥ್ ಪ್ರಭು , ರಾಘವೇಂದ್ರ ರಾವ್ ಇವರು ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಾ ಈ ಯಶಸ್ವಿ ಯೋಜನೆಯಲ್ಲಿ ಪಾಲ್ಗೊಂಡರು. ವಿದ್ಯಾರ್ಥಿ ನಾಯಕರಾದ  ಪ್ರಮೋದ್ , ಪ್ರಸ್ವಿನ್ , ಧನ್ಯರಾಜ್ , ಚೇತನಾ , ಶುಭಶ್ರೀ , ಇವರು ಉಪಸ್ಥಿತರಿದ್ದರು