S.N.M. PLYTECHNIC | School Reachout - ವಿಜ್ಞಾನ ಪ್ರಯೋಗ ದರ್ಶನ

School Reachout - ವಿಜ್ಞಾನ ಪ್ರಯೋಗ ದರ್ಶನ

ಎಸ್.ಎನ್.ಮೂಡಬಿದ್ರಿ ಪಾಲಿಟೆಕ್ನಿಕ್, ಮೂಡುಬಿದಿರೆ

ವಿಜ್ಞಾನ ಪ್ರಯೋಗ ದರ್ಶನ – 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿನೂತನ ಕಾರ್ಯಕ್ರಮ

ನವೆಂಬರ್ - ಡಿಸೆಂಬರ್ ತಿಂಗಳುಗಳಲ್ಲಿ ನಮ್ಮ ಪಾಲಿಟೆಕ್ನಿಕ್‍ನ ವಿದ್ಯಾರ್ಥಿಗಳಿಗೆ  ಸೆಮಿಸ್ಟರ್ ಪರೀಕ್ಷೆಗಳು ಮುಗಿದು ಅಲ್ಪ ಬಿಡುವಿನ ಸಮಯ ವಿದ್ಯಾರ್ಥಿಗಳ    Inplant training, Extensive survey project, N.S.S. ನ ವಾರ್ಷಿಕ ವಿಶೇಷ ಶಿಬಿರಗಳು ನಡೆಯುವ  ಈ ಅವಧಿಯಲ್ಲಿ ಭಾರತ ಸರಕಾರದ “ಉನ್ನತ ಭಾರತ ಅಭಿಯಾನ”ದಡಿ  ಆಯೋಜಿಸಿರುವ “ವಿಜ್ಞಾನ ಪ್ರಯೋಗ ದರ್ಶನ” ಕಾರ್ಯಕ್ರಮದ ಬಗ್ಗೆ ಸ್ವಲ್ಪ ಮಾಹಿತಿ.

ಗ್ರಾಮೀಣ ಪ್ರದೇಶಗಳಿಂದ ಸುತ್ತುವರಿದಿರುವ ಮೂಡುಬಿದಿರೆಯ ಆಸುಪಾಸಿನಲ್ಲಿ ಸರಕಾರಿ, ಅನುದಾನಿತ ಹಾಗೂ ಖಾಸಗಿ ಹೈಸ್ಕೂಲುಗಳು ಹೇರಳವಾಗಿವೆ. 2018-19ರ ಶೈಕ್ಷಣಿಕ ವರ್ಷದಲ್ಲಿ NCERT ಯಡಿ ಪರಿಷ್ಕೃತಗೊಂಡ ಪಠ್ಯಕ್ರಮದಲ್ಲಿ ಅದರಲ್ಲೂ ಮುಖ್ಯವಾಗಿ ವಿಜ್ಞಾನದಲ್ಲಿ ಹಲವು ಸಂಕೀರ್ಣ ವಿಷಯಗಳಿದ್ದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಭೋದನೆ ಮಾಡಲು ಕಷ್ಟವಾಗುತ್ತಿದೆ ಎನ್ನುವ ಅಭಿಪ್ರಾಯ ಹಲವು ಶಾಲೆಗಳ ವಿಜ್ಞಾನ ಭೋಧಿಸುವ ಅಧ್ಯಾಪಕರುಗಳು ನಮ್ಮಲ್ಲಿ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ನಾವು ನಮ್ಮ ಕಾಲೇಜಿನ ಆಯ್ದ ವಿದ್ಯಾರ್ಥಿಗಳ ಹಾಗೂ ಪ್ರಾಧ್ಯಾಪಕರ ಸಭೆ ಸೇರಿಸಿ ಪರಿಹಾರಗಳ ಬಗ್ಗೆ ಚರ್ಚಿಸಿದಾಗ ಹಲವಾರು ಅಭಿಪ್ರಾಯಗಳು ವ್ಯಕ್ತವಾದವು. ಅದರಲ್ಲಿ ಒಮ್ಮತದಿಂದ ಆಯ್ದ ಕಾರ್ಯಕ್ರಮವೇ “ವಿಜ್ಞಾನ ಪ್ರಯೋಗ ದರ್ಶನ”. (ಈ ಹೆಸರನ್ನು   Brainstoring ಪ್ರಕ್ರಿಯೆ ಮೂಲಕ ಆಯ್ದುಕೊಳ್ಳಲಾಗಿತ್ತು). ಇದಕ್ಕೆ ಆಂಗ್ಲಭಾಷೆಯಲ್ಲಿ "School Reachout"  ಎಂದು ಹೆಸರಿಸಲಾಯಿತು.

ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳ ತಂಡಗಳನ್ನು ಕಟ್ಟಿಕೊಂಡು ವಿಜ್ಞಾನ ಭೋದನೆಯ ಒಲವು ಹಾಗೂ  ಅಗತ್ಯತೆ ಇರುವ ಶಾಲೆಗಳಿಗೆ ದಿನಕ್ಕೊಂದರಂತೆ ಭೇಟಿ ನೀಡಿ ಒಂದು ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಡುವಿಲ್ಲದೆ ಸುಮಾರು 7-8 ಘಂಟೆಗಳ ಅವಧಿಯಲ್ಲಿ ಪ್ರಯೋಗಗಳ ಮೂಲಕ ಕ್ಲಿಷ್ಟಕರವಾದ ವಿಷಯಗಳನ್ನು ಸರಳವಾಗಿ ಮನದಟ್ಟು ಮಾಡುವ ಕಾರ್ಯಕ್ರಮವೇ “ವಿಜ್ಞಾನ ಪ್ರಯೋಗ ದರ್ಶನ”. ಎಲ್ಲಾ ವಿದ್ಯಾರ್ಥಿಗಳಿಗೆ ಸ್ವತ: ಈ ಪ್ರಯೋಗಗಳನ್ನು ಮಾಡಲು ಅವಕಾಶಗಳನ್ನು ನೀಡುವುದು ಹಾಗೂ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯ. Dale’s cone of learning ಸಿದ್ಧಾಂತದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ವಿಷಯ ಗ್ರಹಿಕೆ ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು  ಸಾಕಷ್ಟು ತಯಾರಿ ನಡೆಸಬೇಕಿತ್ತು. ಪ್ರಥಮವಾಗಿ ಹತ್ತನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳನ್ನು ಅವಲೋಕಿಸಿ ಅದರಲ್ಲಿ ಬರುವ ಎಲ್ಲಾ ಕ್ಲಿಷ್ಟಕರ ವಿಷಯಗಳನ್ನು (Physics & Chemistry)  ಪಟ್ಟಿ ಮಾಡಿ, ಈ ವಿಷಯಗಳನ್ನು ಅತ್ಯಂತ ಸರಳವಾಗಿ ಪ್ರಯೋಗಗಳ ಮೂಲಕ ಭೋಧಿಸಲು  ನಮ್ಮ ಪಾಲಿಟೆಕ್ನಿಕ್‍ನ ಪ್ರಯೋಗ ಶಾಲೆಗಳಲ್ಲಿ ಲಭ್ಯವಿರುವ   ಸಲಕರಣೆಗಳನ್ನು ಒಟ್ಟುಗೂಡಿಸಿ, ಒಂದೊಂದು ವಿಷಯವನ್ನು ಕೂಲಂಕುಷವಾಗಿ ಭೋದಿಸಲು ನಮ್ಮ ವಿದ್ಯಾರ್ಥಿಗಳ ಚಿಕ್ಕ ತಂಡಗಳನ್ನು ಮಾಡಿ, ಸೂಕ್ತ ತರಬೇತಿ ನೀಡಿ, ಅಭ್ಯಾಸಗಳನ್ನು ಮಾಡಿಸಿ ಸಮರ್ಪಕವಾದ ಭೋಧನೆಗೆ ಬೇಕಾಗುವ ಪ್ರಯೋಗಗಳನ್ನು / ಉಪಕರಣಗಳನ್ನು ಪ್ರಾಧ್ಯಾಪಕರುಗಳ ಮೇಲ್ವಿಚಾರಣೆಯಲ್ಲಿ ತಯಾರಿಸಿ, ಸಮೀಪದ ಶಾಲೆಗಳನ್ನು ಸಂಪರ್ಕಿಸಿ, ದಿನ ನಿಗದಿಪಡಿಸಿ, ನಮ್ಮ ಪ್ರಾಧ್ಯಾಪಕರುಗಳ ಸ್ವಂತ ವಾಹನಗಳಲ್ಲಿ ನಿಗದಿಪಡಿಸಿದ ಶಾಲೆಗಳಿಗೆ  ಪೂರ್ವಾಹ್ನ 9.30ರ ಒಳಗೆ ಒಯ್ದು, ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಚಿಕ್ಕ ತಂಡಗಳಾಗಿ ವಿಂಗಡಿಸಿ ದಿನಕ್ಕೊಂದು ಶಾಲೆಯಂತೆ ಬಿಡುವಿಲ್ಲದ ಕಾರ್ಯಕ್ರಮವನ್ನು ಆಯೋಜಿಸಿ ಶಾಲಾ ವಿದ್ಯಾರ್ಥಿಗಳಿಗೆ ಭೋಧನೆ ಮಾಡಿ, ಸಂಶಯ (Doubts)ಗಳನ್ನು ಪ್ರಯೋಗಗಳ ಮೂಲಕವೇ ನಿವಾರಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ 2018-19ರ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಸುಮಾರು 15 ಶಾಲೆಗಳ 500-600 ವಿದ್ಯಾರ್ಥಿಗಳಿಗೆ  ಈ ಕಾರ್ಯಕ್ರಮಗಳನ್ನು ನಿರ್ವಹಿಸಿರುವ ಫಲವಾಗಿ ಫಲಾನುಭವಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಇದರಿಂದ ಆಗಿರುವ ಪ್ರಯೋಜನಗಳು ಹಾಗೂ ವಿಷಯ ಗ್ರಹಿಕೆಯ ಬಗ್ಗೆ ಮಾಹಿತಿ  ಗುಣಮಾಪನಗಳ (Feedback) ಮೂಲಕ ತಿಳಿದುಬಂತು. ಅಂತಿಮ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಫಲಿತಾಂಶಗಳಲ್ಲೂ ಧನಾತ್ಮಕ ಬೆಳವಣಿಗೆಯಾಗಿರುವ ಬಗ್ಗೆ ಕೆಲವು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

ಪ್ರಸ್ತುತ 2019-20 ಶೈಕ್ಷಣಿಕ  ವರ್ಷದ ಆರಂಭದಿಂದಲೂ ಹಲವು ಶಾಲೆಗಳಿಂದ  ಈ ಕಾರ್ಯಕ್ರಮ ನಡೆಸಲು ನಮಗೆ ಅಪಾರ ಬೇಡಿಕೆ ಬಂದಿದ್ದು ಈ ವರ್ಷ ಇದನ್ನು ಇನ್ನೂ ಪರಿಣಾಮಕಾರಿಯಾಗಿ ನಡೆಸಲು ಎಲ್ಲಾ ಪೂರ್ವ ತಯಾರಿಗಳನ್ನು ಮಾಡಿ 25 ನೇ ನವೆಂಬರ್ 2019ರಂದು  ಸರಕಾರಿ ಸಂಯುಕ್ತ ಪ್ರೌಢಶಾಲೆ, ನೀರ್ಕೆರೆಯಲ್ಲಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಿಂದ  ಶಾಲಾ ಮಕ್ಕಳಿಗಷ್ಟೇ ಅಲ್ಲದೆ ನಮ್ಮ ವಿದ್ಯಾರ್ಥಿಗಳಿಗೂ ಸಾಕಷ್ಟು ಪ್ರಯೋಜನವಾಗಿರುವುದು ನಾವು ಗಮನಿಸಿರುತ್ತೇವೆ. ಬಿಡುವಿನ ಅವಧಿಯಲ್ಲಿ ಮೊಬೈಲ್ ಫೋನ್‍ಗಳಿಗೆ, Whatsapp, Facebook, PUBG  ಯಂತಹ ಗೇಮ್‍ಗಳಿಗೆ ಅಂಟಿಕೊಳ್ಳುವ ಚಟವನ್ನು ಬೆಳೆಸಿಕೊಂಡಿರುವ ಯುವಕರನ್ನು ಒಂದು ಉತ್ತಮ ಕಾರ್ಯಕ್ರಮದಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು, ಈ ವಿದ್ಯಾರ್ಥಿಗಳು ತಂಡಗಳಲ್ಲಿ ಕೆಲಸ ಮಾಡುವ, ಸಂವಹನ, ಕಲೆ,  ಮುಂದಾಳತ್ವ ಇತ್ಯಾದಿ ಗುಣಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಮಾತ್ರವಲ್ಲದೆ ಯುವಜನತೆಯನ್ನು ಸಾಮಾಜಿಕವಾಗಿ ಹೇಗೆ ಪರಿಣಾಮಕಾರಿಯಾಗಿ ತೊಡಗಿಸಿ, ಬಳಸಿಕೊಳ್ಳಬಹುದು ಎಂಬುವುದಕ್ಕೆ ವಿಜ್ಞಾನ ಪ್ರಯೋಗ ದರ್ಶನವು ಒಂದು ಉತ್ತಮ ನಿದರ್ಶನ.

ಪಾಲ್ಗೊಂಡ ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಸಹಕರಿಸಿದ ಪ್ರಾಧ್ಯಾಪಕರುಗಳಿಗೆ ಹಾಗೂ ಸರ್ವ ರೀತಿಯ ಪ್ರೋತ್ಸಾಹ, ಸಹಕಾರ ಹಾಗೂ ಪ್ರೀತಿಯಿಂದ ನಮ್ಮನ್ನು ಬರಮಾಡಿಕೊಂಡ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

ಪ್ರಾಂಶುಪಾಲರು ಎಸ್.ಎನ್.ಮೂಡಬಿದ್ರಿ ಪಾಲಿಟೆಕ್ನಿಕ್, ಮೂಡುಬಿದಿರೆ

 

Vijayakarnataka news on 27-11-2019

 

Hosadigantha news on 28-11-2019

 

Udayavaani  news on 29-11-2019

 Date :  25/11/2019- Monday

School:  Government High School Neerkere

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Date :  26/11/2019- Tuesday

School:  Gunashree High School Siddakatte

 

 

 

 

 

 

 

 

 

 

 

 

 

Date :  27/11/2019- Wednesday

School:  Government High School Siddakatte

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Date :  29/11/2019- Thursday-  Batch 1

School:  Government High School Mijar

 

 

 

 

Date :  29/11/2019- Thursday - Batch 2

School:  Government High School Kuppepadavu

 


 

Date :  30/11/2019- Satruday 

School:  Government High School Kalya- Nitte