S.N.M. PLYTECHNIC | NSS Trekking with Cleaning - Weekend camp

NSS Trekking with Cleaning - Weekend camp

ಎಸ್. ಎನ್. ಎಮ್. ಪಾಲಿಟೆಕ್ನಿಕ್, ಮೂಡುಬಿದಿರೆ

ಎನ್.ಎಸ್.ಎಸ್ ಘಟಕ

ಚಾರಣದೊಂದಿಗೆ ಸ್ವಚ್ಚತೆ - 2 ದಿನದ  ವಾರಾಂತ್ಯದ ಶಿಬಿರ

ಮೂಡಬಿದಿರೆಯ ಎಸ್.ಎನ್.ಎಮ್ ಪಾಲಿಟೆಕ್ನಿಕ್‍ನ ಎನ್.ಎಸ್.ಎಸ್ ವಿಧ್ಯಾರ್ಥಿಗಳಿಂದ ದಿನಾಂಕ 11-01-2020 ಶನಿವಾರ ಹಾಗು 12-01-2020ರ ಭಾನುವಾರದÀಂದು 2 ದಿನಗಳ “ಚಾರಣದೊಂದಿಗೆ ಸ್ವಚ್ಚತೆ” ಎಂಬ ವಾರಾಂತ್ಯದ ಶಿಬಿರ ಕಾರ್ಯಕ್ರಮವನ್ನು ಮೂಡುಬಿದಿರೆಯ ಸಮೀಪದ “ಕೊಣಾಜೆಕಲ್ಲು ಬೆಟ್ಟ”ದಲ್ಲಿ ಹಮ್ಮಿಕೊಳ್ಳಲಾಯಿತು.

                ಈ ಹಿಂದೆ 2019 ರ ಅಕ್ಟೋಬರ್ 6ನೇ ತಾರೀಕಿನಂದು ಇದೇ ಕೊಣಾಜೆಕಲ್ಲಿನಲ್ಲಿ ನಾವು ಆಯೋಜಿಸಿದ್ದ ಒಂದು ದಿನದ “ಚಾರಣದೊಂದಿಗೆ ಸ್ವಚ್ಚತೆ” ಕಾರ್ಯಕ್ರಮದ ಅದ್ಬುತ ಅನುಭವ ಹಾಗು ಯಶಸ್ಸಿನಿಂದ ಉತ್ತೇಜಿತರಾಗಿ ಈ ಭಾರಿ ಮತ್ತೊಮ್ಮೆ ಎರಡು ದಿನಗಳ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಸಾಕಷ್ಟು ಪೂರ್ವ ತಯಾರಿ ನಡೆಸಿ ಜನವರಿ 11 ರ ಶನಿವಾರ ಬೆಳಿಗ್ಗೆ 8.30ಕ್ಕೆ ಸುಮಾರು 60ರಷ್ಟು ವಿಧ್ಯಾರ್ಥಿಗಳು ಹಾಗು ಉಪನ್ಯಾಸಕರ ತಂಡದ ಚಾರಣ ಪ್ರಾರಂಭಗೊಂಡಿತು. 30 ನಿಮಿಷದ ನಡಿಗೆಯ ಬಳಿಕ ಕೊಣಾಜೆಕಲ್ಲು ಸಿದ್ದಾಶ್ರಮವನ್ನು ತಲುಪಿ, ಅಲ್ಲಿ ಪಾನೀಯ ಹಾಗು ತಿಂಡಿಯ ಸೇವನೆಯ ನಂತರ ಮಧ್ಯಾಹ್ನ 12.30 ರ ತನಕ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡಲಾಯಿತು ಬಳಿಕ ಕೊಣಾಜೆಕಲ್ಲು ಸಿದ್ದಾಶ್ರಮದ ಶ್ರೀ ಗಣೇಶ್ ಗುರೂಜೀಯವರ ನೇತೃತ್ವದಲ್ಲಿ ನಡೆದ ನಿತ್ಯ ಪೂಜೆಯಲ್ಲಿ ಭಾಗವಹಿಸಿ ಊಟ ಮುಗಿಸಿ ಸ್ವಲ್ಪ ವಿಶ್ರಾಂತಿ ಪಡೆದು ಗುರೂಜೀಯವರಿಂದ ಕೊಣಾಜೆಕಲ್ಲು ಕ್ಷೇತ್ರದ ಇತಿಹಾಸವನ್ನು ಕೇಳಿ ತಿಳಿದುಕೊಂಡು ಪುನಃ ಸಂಜೆ 5 ಘಂಟೆಯ ವರೆಗೆ ಸ್ವಚ್ಚತಾಕಾರ್ಯದಲ್ಲಿ ತೊಡಗಿಕೊಂಡೆವು.

                ಸಂಜೆಯ ಚಹಾ ವಿರಾಮದ ಬಳಿಕ ಆಶ್ರಮದಲ್ಲಿ ವಿಧ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮವು ನಡೆಯಿತು. ಸಂಜೆಯ ನಿತ್ಯ ಪೂಜೆ, ಯಾಗಗಳಲ್ಲಿ ಭಾಗವಹಿಸಿ ನಂತರ ಸ್ವಲ್ಪ ಸಮಯ ಮನೋರಂಜನಾ ಆಟಗಳನ್ನು ಆಡಿ, ರಾತ್ರಿಯ ಊಟ ಮುಗಿಸಿ, ಕೊಣಾಜೆ ಕಲ್ಲಿನ ಆ ಸುಂದರ ರಮಣೀಯ ನಿಸರ್ಗದ ಮಡಿಲಿನಲ್ಲಿ , ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಹುಣ್ಣಿಮೆಯ ಚಂದಿರನ ಬೆಳಕಿನಡಿಯಲ್ಲಿ ಸುಖ ನಿದ್ರೆಗೆ ಜಾರಿದೆವು.

                ಮರುದಿನ ಮುಂಜಾನೆಯ ಮಂಜಿನ, ಕೊರೆಯುವ ಚಳಿಯಲ್ಲಿ 4 ಘಂಟೆಗೆ ಎದ್ದು ತಣ್ಣೀರಿನ  ಸ್ನಾನ ಮಾಡಿ , ನಿತ್ಯ ಪೂಜೆಯಲ್ಲಿ ಭಾಗವಹಿಸಿ , ಗುರೂಜೀಯವರ ಮಾರ್ಗದರ್ಶನದಲ್ಲಿ ಕೊಣಾಜೆಕಲ್ಲು ಕ್ಷೇತ್ರದ ಭಸ್ಮಕೊಳ , ಕೆರೆ ಪ್ರದೇಶವನ್ನು ಸಂದರ್ಶಿಸಿ ನಂತರ ಗಂಜಿ ಊಟ ಮಾಡಿ ಆಶ್ರಮದ ಮೇಲ್ಬಾಗದಲ್ಲಿರುವ ಕಲ್ಲಿನ ತುತ್ತತುದಿಯ ಪ್ರದೇಶಕ್ಕೆ ಬೇಟಿ ನೀಡಲು ತೆರಳಿದೆವು

30 ನಿಮಿಷದ ನಡಿಗೆÉಯ ಬಳಿಕ ಮೇಲ್ಭಾಗದ ಎರಡು ದೊಡ್ಡ ಏಕಶಿಲಾ ಕಲ್ಲಿನ ಬೆಟ್ಟದ ದರ್ಶನ ಪಡೆದೆವು. ಅಲ್ಲಿಯೂ ಸ್ಚಚ್ಚತಾ ಕಾರ್ಯವನ್ನು ಮಾಡಿ ನಂತರ ಮರಳಿ ಆಶ್ರಮಕ್ಕೆ ಬಂದು ಮಧ್ಯಾಹ್ನದ ಪೂಜೆಯಲ್ಲಿ ಭಾಗಿಯಾಗಿ ಊಟ ಮುಗಿಸಿದ ನಂತರ , ಸಮಾರೋಪ ಸಮಾರಂಭದಲ್ಲಿ ಗುರೂಜೀಯವರು , ಪ್ರಾಂಶುಪಾಲರು , ಉಪನ್ಯಾಸಕರು , ವಿಧ್ಯಾರ್ಥಿಗಳು ತಮ್ಮ ತಮ್ಮ ಅನುಭವಗಳನ್ನು , ಅನಿಸಿಕೆಯನ್ನು ವ್ಯಕ್ತಪಡಿಸಿದರು , ಬಳಿಕ ಎಲ್ಲರಿಗೂ ವಂದಿಸಿ, ನಾವು ಸಂಗ್ರಹಿಸಿದ ಸುಮಾರು 20-25ರಷ್ಟು ದೊಡ್ಡ ಚೀಲಗಳಲ್ಲಿ ಇದ್ದ ತ್ಯಾಜ್ಯಗಳನ್ನು ಹೊತ್ತುಕೊಂಡು ಕೊಣಾಜೆಕಲ್ಲಿನ ತಳಬಾಗಕ್ಕೆ ಬಂದು ಶಿರ್ತಾಡಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ತ್ಯಾಜ್ಯದ ವಿಲೇವಾರಿ ಮಾಡಿ, ಯಶಸ್ವಿಯಾಗಿ “ಚಾರಣದೊಂದಿಗೆ ಸ್ವಚ್ಚತೆ” ಕಾರ್ಯಕ್ರಮವನ್ನು ಮುಗಿಸಿದೆವು.

ಈ ಕಾರ್ಯಕ್ರಮದಲ್ಲಿ ನಮ್ಮ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಾದ ಶ್ರೀ ಜೆ.ಜೆ.ಪಿಂಟೋ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ರಾಮ್ ಪ್ರಸಾದ್, ಉಪನ್ಯಾಸಕರಾದ ಶ್ರೀ ಧವಳ ಕೀರ್ತಿ, ಹರ್ಷ, ಸುಧಿರಾಜ್ , ವರುಣ್ ಕುಮಾರ್, ರವಳನಾಥ್ ಪ್ರಭು , ಪ್ರಜ್ಞಾ , ಹರೀಶ್ ಭಟ್, ರಮೇಶ್ ಅಮೀನ್, ರಾಘವೇಂದ್ರ ಭಟ್ ಭಾಗವಹಿಸಿದ್ದರು. ವಿಧ್ಯಾರ್ಥಿ ನಾಯಕರಾದ ಪ್ರಸನ್ನ, ಗಣೇಶ್ , ಜಗನ್ನಾಥ್ , ಸುಹಾಸ್, ಶಿವಪ್ರಸಾದ್, ಶರ್ಮಿತ್ , ಸೌರಬ್ , ಪವಿತ್ರ , ಸುಶ್ಮಿತಾ ಇವರು ಈ ಶಿಬಿರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಎನ್.ಎಸ್.ಎಸ್. ಹಳೇ ವಿಧ್ಯಾರ್ಥಿಗಳಾದ ಪ್ರಮೋದ್ , ಸುಧೀರ್, ಸೃಜನ್ ಈ ಸೇವಾಕಾರ್ಯದಲ್ಲಿ ಭಾಗವಹಿಸಿದ್ದರು.

 

 

Kannada prabha news paper on 16-01-2020 

 

KONAJE KALLU VIEW

 

TREKKING on 11-01-2020  8.30 a.m 

 

 

 

 

 

CLEANING

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

LUNCH TIME

 

 

 

 POOJA , BHAJANE GAMES AND NIGHT VIEW OF KONAJE KALLU 

 

 

 

 

 

 

 

 

 

 

 

 

 

 

 

 

 

 

 

 

MORNING TREKKING TO TOP OF KONAJEKALLU 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

VALEDICTORY FUNCTION 

 

 

 

 

 

 

 

 

 

 

 

ಚಾರಣದ ಅಂತಿಮ ಹಂತ , ನಾವು ಸಂಗ್ರಹಿಸಿದ ತ್ಯಾಜ್ಯದೊಂದಿಗೆ ( Nearly 100 kg)