S.N.M. PLYTECHNIC | Konaje kallu "Trekking and Cleaning"

Konaje kallu "Trekking and Cleaning"

SNM Polytechnic Moodbidri ಯ  Team NSS  ನ  06-10-2019  ರ  ಕೊಣಾಜೆ  ಕಲ್ಲು ಟ್ರೆಕಿಂಗ್ & ಕ್ಲೀನಿಂಗ್ 

ಬೆಳಗ್ಗೆ 9.30ಕ್ಕೆ ಪ್ರಾರಂಭವಾದ ನಮ್ಮ  ಚಾರಣ ಕೊಣಾಜೆ ಕಲ್ಲಿನ ಸುಂದರ ಪ್ರಕೃತಿಯ ಕಡೆಗೆ ಸಾಗಿತ್ತು. 

ನಮ್ಮ ಈ  ಸ್ವಚ್ಛತಾ ಕಾರ್ಯಕ್ಕೆ ನಿಜವಾಗಿಯು ಪ್ರಕೃತಿಯು  ಸಹಕರಿಸಿತ್ತು ಯಾಕೆಂದರೆ ನಿನ್ನೆ ರಾತ್ರಿಯಿಂದಲೇ ಸತತವಾಗಿ ಮಳೆ ಸುರಿಯುತ್ತಿತ್ತು, ಅಲ್ಲದೆ ಇಂದು ಬೆಳೆಗ್ಗೆ ಬೇರೆ ಮೋಡ ಮುಸುಕಿದ ವಾತಾವರಣ ಜೊತೆಗೆ ತುಂತುರು ಮಳೆ ,  ಒಂದು ಬಾರಿ ಚಾರಣ ವನ್ನು ಮುಂದಿನ ಭಾನುವಾರಕ್ಕೆ  ಮುಂದೂಡೋಣ ಎಂದು ಮನಸ್ಸಿನಲ್ಲೇ ತೀರ್ಮಾನಿಸಿ  ಬಿಟ್ಟಿದ್ದೆ,  ಆದರೂ  ಗಟ್ಟಿ ಮನಸ್ಸು ಮಾಡಿ ಒಳ್ಳೆ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ ಮುಂದುವರೆಯೋಣ ಎಂದು ನಿಗದಿತ ಸಮಯಕ್ಕೆ ಸರಿಯಾಗಿ ಪ್ರಾರಂಭಿಸಿಬಿಟ್ಟೆವು.  ನಮ್ಮೊಂದಿಗೆ ಕೈ ಜೋಡಿಸಿದ ಪ್ರಕೃತಿಯು  ಅಷ್ಟೊಂದು ಮೋಡವಿದ್ದರೂ ಒಂದು ಹನಿ ಮಳೆಯನ್ನೂ ಸುರಿಸಲಿಲ್ಲ,  ಸಾಲದಕ್ಕೆ ವಾತಾವರಣವನ್ನು  ತಂಪಾಗಿರಿಸಿ ನಮ್ಮ ವಿದ್ಯಾರ್ಥಿಗಳಿಗೆ ಆಯಾಸವಾಗದಂತೆ ನೋಡಿಕೊಂಡಿತು.  

ಹೀಗೆ  ಸುಮಾರು 65 ವಿದ್ಯಾರ್ಥಿ,  ವಿದ್ಯಾರ್ಥಿನಿಯರು ಚಾರಣದೊಂದಿಗೆ ದಾರಿಯುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಕಸ, ಬಾಟಲಿ,  ಇನ್ನಿತರ ತಾಜ್ಯವನ್ನು  ಸಂಗ್ರಹಿಸುತ್ತಾ ಮುನ್ನಡೆಯುತ್ತಾ ಸುಮಾರು 10.30ರ  ಹೊತ್ತಿಗೆ ಕೊಣಾಜೆ ಕಲ್ಲು ಆಶ್ರಮಕ್ಕೆ  ತಲುಪಿತು. 

ಅಲ್ಲಿ 10 ನಿಮಿಷದ ವಿಶ್ರಾಂತಿಯ ಬಳಿಕ 65 ಮಂದಿಯನ್ನು 3 ತಂಡಗಳನ್ನಾಗಿ ವಿಂಗಡಿಸಿ,  ಆಶ್ರಮದ ವಠಾರವನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದರು.  ಬೇಸರದ ವಿಷಯವೆಂದರೆ, ಇಲ್ಲಿ ಬರುವಂತಹ ಪ್ರವಾಸಿಗಳು ತಾವು ತರುವಂತಹ ನೀರಿನ ಬಾಟಲ್,  ಕುರುಕಲು ತಿಂಡಿಯ ಪ್ಲಾಸ್ಟಿಕ್ ಕವರ್ ಗಳನ್ನ ಅಲ್ಲಲ್ಲೇ ಎಸೆದು, ಇಡೀ ಪರಿಸರದ ಅಂದವನ್ನೇ ಹಾಳುಗೆಡವಿದ್ದು. ಸುಮಾರು 12 ಘಂಟೆಯ ತನಕ ನಡೆದ ಸ್ವಚ್ಛತಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಶ್ರಮದ ಆವರಣದಲ್ಲಿ ವಿಶ್ರಾಂತಿ ಪಡೆಯುದರೊಂದಿಗೆ   ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಪ್ರಕೃತಿಯ ಸೊಬಗನ್ನು ಸೆರೆಹಿಡಿಯುತ್ತಾ,  ಸೆಲ್ಫಿ ಫೋಟೋ ತೆಗೆಯುತ್ತಾ,  ಕೊಣಾಜೆಕಲ್ಲು ಪರಿಸರದಲ್ಲಿರುವ ಸುಮಾರು 40-50  ಮಂಗಗಳೊಂದಿಗೆ  ಚೇಷ್ಟೆ ಮಾಡುತ್ತಾ ಸಮಯ ಕಳೆದರು.  

12.30 ರ ಸಮಯದಲ್ಲಿ  ಆಶ್ರಮದಲ್ಲಿ ನಡೆದ  ಪೂಜೆಯಲ್ಲಿ ಭಾಗವಹಿಸಿ,  1.30ಕ್ಕೆ  ಸಹಭೋಜನ ಸೇವಿಸಿ. ಅಲ್ಲಿಂದ  ತಾವು  ಒಟ್ಟು ಮಾಡಿರುವ ಸುಮಾರು  50 ಗೋಣಿ ಪ್ಲಾಸ್ಟಿಕ್ ಹಾಗು ಇನ್ನಿತರ ತಾಜ್ಯವನ್ನು ಸುಮಾರು 2km ದೂರದ ತನಕ ಹೊತ್ತು ಸಾಗಿಸಿ ಕೊಣಾಜೆ ಕಲ್ಲು ಟ್ರೆಕಿಂಗ್ & ಕ್ಲೀನಿಂಗ್ ಕಾರ್ಯಕ್ರಮವನ್ನು ಮದ್ಯಾಹ್ನ ಸುಮಾರು 3.30ಕ್ಕೆ  ಯಶಸ್ವಿಯಾಗಿ ಮುಗಿಸಿದರು.  

ಅಂದಾಜು ಸುಮಾರು 200 kg  ( 2 ಕ್ವಿಂಟಲ್ ) ತಾಜ್ಯವನ್ನು ಕೊಣಾಜೆಕಲ್ಲಿನ ತಳಭಾಗದಲ್ಲಿ  ಸಂಗ್ರಹಿಸಿದೆವು.  ನಂತರ  ಗ್ರಾಮಪಂಚಾಯತ್ ಸದಸ್ಯರಾದ  ಸಂತೋಷ್ ಶೆಟ್ಟಿ ಯವರು ತಾಜ್ಯ  ವಿಲೇವಾರಿ ಬಗ್ಗೆ ( ಕಸವನ್ನು ಅಲ್ಲಿಂದ  ತಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸುವ ಬಗ್ಗೆ ) ಜವಾಬ್ದಾರಿ ವಹಿಸಿಕೊಂಡರು ಹಾಗು ಎಲ್ಲಾ NSS  ವಿದ್ಯಾರ್ಥಿಗಳಿಗೆ ತಂಪುಪಾನೀಯ ವನ್ನು  ನೀಡಿದರು.  

NSS ವಿದ್ಯಾರ್ಥಿ ನಾಯಕರಾದ  ಜಗನ್ನಾಥ್ ,  ಗಣೇಶ್ ,  ಪ್ರಸನ್ನ, ಸುಹಾಸ್,  ಶಿವಪ್ರಸಾದ್,  ಸಂಪತ್,  ಶರ್ಮಿತ್, ಪವಿತ್ರ, ಸ್ವಾತಿ, ಸುಶ್ಮಿತ, ಶ್ರೇಯ ಹಾಗು ಇತರರ ಯಶಸ್ವಿ ಮುಂದಾಳತ್ವದಲ್ಲಿ ನಡೆದ  ಈ ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳೊಂದಿಗೆ SNM  Polytechnic  ನ  NSS ಕಾರ್ಯಕ್ರಮಾಧಿಕಾರಿ ರಾಮ್ ಪ್ರಸಾದ್,  Redcross ಕಾರ್ಯಕ್ರಮಾಧಿಕಾರಿ ರವಳನಾಥ್ ಪ್ರಭು,  ಉಪನ್ಯಾಸಕರಾದ ಸುಧಿರಾಜ್ರಾಘವೇಂದ್ರ ಭಟ್,  NSS ಹಳೆ ವಿದ್ಯಾರ್ಥಿ ಪ್ರಮೋದ್ ಭಾಗವಹಿಸಿದ್ದರು.

 

ಕೊಣಾಜೆಕಲ್ಲು ಟ್ರೆಕಿಂಗ್& ಕ್ಲೀನಿಂಗ್ ನಡೆಸಿದವರು: SNM Polytechnic Moodbidri ಯ  NSS & Redcross ವಿದ್ಯಾರ್ಥಿಗಳು 

ದಿನಾಂಕ : 06-10-2019

ಸಮಯ: ಬೆಳಗ್ಗೆ 9.30 ರಿಂದ ಮದ್ಯಾಹ್ನ 3.30

ಭಾಗವಹಿಸಿದ ವಿದ್ಯಾರ್ಥಿಗಳ ಸಂಖ್ಯೆ  : 65. 

ಒಟ್ಟು ಸಂಗ್ರಹವಾದ ತಾಜ್ಯ : 200kg.  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

ಒಟ್ಟು ಸಂಗ್ರಹವಾದ ತಾಜ್ಯ : 200kg.   

 

 

ವಿಶ್ರಾಂತಿಯ ಸಮಯದಲ್ಲಿ , ಪ್ರಕೃತಿಯ ಮಡಿಲಲ್ಲಿ