S.N.M. PLYTECHNIC | NSS ORIENTATION PROGRAMME 2020-21

NSS ORIENTATION PROGRAMME 2020-21

ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡುಬಿದಿರೆ

ಎನ್.ಎಸ್.ಎಸ್. ನೂತನ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮ

ಎಸ್.ಎನ್.ಎಂ ಪಾಲಿಟೆಕ್ನಿಕ್ ಮೂಡುಬಿದಿರೆ ಇಲ್ಲಿನ ರಾಷ್ಟೀಯ ಸೇವಾ ಯೋಜನೆಯ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗು ತರಬೇತಿ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ದಿನಾಂಕ 12-02-2021 ರಂದು ನಡೆಯಿತು.

ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಶ್ರೀ.ಜೆ.ಜೆ.ಪಿಂಟೋರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಎಸ್.ಎಸ್ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಇದಕ್ಕೆ ಕಾರ್ಯಕ್ರಮವನ್ನು ಸಂಪೂರ್ಣವಾಗಿ, ಯಾವುದೇ ಲೋಪವಾಗದೆ ಯಶಸ್ವಿಯಾಗಿ ನಿರ್ವಹಿಸಿದ ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕರೇ ಸಾಕ್ಷಿ ಎಂದು ಹೇಳಿದರು.

& ವಿಭಾಗ ಮುಖ್ಯಸ್ಥರಾದ ಶ್ರೀ ಧವಳಕೀರ್ತಿ ಹಾಗು ಅಟೋಮೊಬೈಲ್ ವಿಭಾಗ ಮುಖ್ಯಸ್ಥರಾದ ಶ್ರೀ ಅರ್ ಗಣೇಶನ್ ರವರು ಎನ್.ಎಸ್.ಎಸ್ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.

ಎನ್.ಎಸ್.ಎಸ್ ಘಟಕ 1 ಕಾರ್ಯಕ್ರಮಾಧಿಕಾರಿ ರಾಮ್ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾಲೇಜಿನಲ್ಲಿ ನಡೆಯುವ ಎನ್.ಎಸ್.ಎಸ್ ಕಾರ್ಯಚಟುವಟಿಕೆಗಳನ್ನು ತಿಳಿಸಿದರು. ಘಟಕ 2 ಕಾರ್ಯಕ್ರಮಾಧಿಕಾರಿ ಕಿರಣ್ ವೈ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

&ಸಿ ವಿಭಾಗ ಮುಖ್ಯಸ್ಥರಾದ ಶ್ರೀಮತಿ ರಾಜೇಶ್ವರೀ ಕೆ.ಎನ್, ಗಣಿತ ವಿಭಾಗ ಮುಖ್ಯಸ್ಥರಾದ ಶ್ರೀ ಮಲ್ಲಿಕಾರ್ಜುನ, ಮೆಕಾನಿಕಲ್ ವಿಭಾಗ ಮುಖ್ಯಸ್ಥರಾದ ಶ್ರೀ ಗುರುಪ್ರಸಾದ್ ಪ್ರಭು , ಮೆಕಾಟ್ರಾನಿಕ್ಸ್ ವಿಭಾಗ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಶೆಣೈ , ಸಿವಿಲ್ ವಿಭಾಗ ಮುಖ್ಯಸ್ಥರಾದ ಶ್ರೀ ಗೋಪಾಲ ಕೃಷ್ಣ , ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥರಾದ ಶ್ರೀ ಪ್ರಶಾಂತ್ ಹಾಗು ಎನ್.ಎಸ್.ಎಸ್ ಘಟಕ ನಾಯಕರಾದ ಸೌರಭ್ , ಶರ್ಮಿತ್, ಕುಮಾರಿ ಸ್ವಾತಿ , ಕುಮಾರಿ ಶ್ರೇಯಾ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ವಯಂಸೇವಕರಾದ ಕುಮಾರಿ ಸುಷ್ಮಾ ಹಾಗು ಅಪೇಕ್ಷಾ ಇವರು ಪ್ರಾರ್ಥನೆಯ ಮೂಲಕ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಎನ್.ಎಸ್.ಎಸ್ ಘಟಕದ ಜತೆಕಾರ್ಯದರ್ಶಿ ಶರತ್ ಸ್ವಾಗತಿಸಿ, ಘಟಕ ನಾಯಕಿ ಶ್ರೇಯಾ ವಂದಿಸಿದರು. ಕಾರ್ಯದರ್ಶಿ ಹೇಮಂತ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ಎನ್.ಎಸ್.ಎಸ್ ಘಟಕ 1 ಹಾಗು 2 ಕಾರ್ಯಕ್ರಮಾಧಿಕಾರಿಗಳಾದ ರಾಮ್ಪ್ರಸಾದ್ ಹಾಗು ಕಿರಣ್ ವೈ ಇವರು ನೂತನ ಸ್ವಯಂಸೇವಕರಿಗೆ ಎನ್.ಎಸ್.ಎಸ್ ಬಗ್ಗೆ, ಅದರ ಚಟುವಟಿಕೆ ಬಗ್ಗೆ, ಉಪಯೋಗಗಳ ಬಗ್ಗೆ, ವಿವರವಾದ ಮಾಹಿತಿ/ತರಬೇತಿ ನೀಡಿದರು

Total Number of 1st year Students joined NSS = 107.