S.N.M. PLYTECHNIC | ಹಾವು ಕಡಿತ ನಿಯಂತ್ರಣ- ಮಾಹಿತಿ

ಹಾವು ಕಡಿತ ನಿಯಂತ್ರಣ- ಮಾಹಿತಿ

ದಿನಾಂಕ 23-02-2021 ರಂದು ನಮ್ಮ ಪಾಲಿಟೆಕ್ನಿಕ್ ನಲ್ಲಿ “ಹಾವು ಮತ್ತು ನಾವು” ಸಂಸ್ಥೆಯವರು ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗಾಗಿ “ ಹಾವು ಕಡಿತ ನಿಯಂತ್ರಣ” ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಗಳಾಗಿ “ಹಾವು ಮತ್ತು ನಾವು” ಸಂಸ್ಥೆಯ  ಶ್ರೀ ವಿಪಿನ್ ರಾಯ್ ಹಾಗು ಕುಮಾರಿ ಸ್ಪೂರ್ತಿ ಶೆಟ್ಟಿ ಇವರು ಭಾಗವಹಿಸಿದ್ದರು.

ನಮ್ಮ ಪಾಲಿಟೆಕ್ನಿಕ್‍ನ ರಾಷ್ಟ್ರೀಯ ಸೇವಾ ಯೋಜನೆಯ 125 ಮಂದಿ ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ , “ ಹಾವು ಕಡಿತ ನಿಯಂತ್ರಣ”ದ ಬಗ್ಗೆ ಮಾಹಿತಿ ಪಡೆದುಕೊಂಡರು.

ಘಟಕ 2ರ ಕಾರ್ಯಕ್ರಮಾಧಿಕಾರಿ ಕಿರಣ್ ವೈ,  ಘಟಕ 1 ಹಾಗು 2ರ ವಿಧ್ಯಾರ್ಥಿ ನಾಯಕರಾದ ಸೌರಭ್, ಶರ್ಮಿತ್ , ಸ್ವಾತಿ , ಶ್ರೇಯಾ, ಹೇಮಂತ್ , ಸಂಪತ್, ಭವ್ಯ , ಸುಶ್ಮಿತಾ , ಶರತ್ , ತ್ರಿಶಾಂತ್ , ಅಪೇಕ್ಷಾ , ಹಾಗು ಸುಶ್ಮಾ ಉಪಸ್ಥಿತರಿದ್ದರು.