S.N.M. PLYTECHNIC | ನೀರ್ಕೆರೆ ಪ್ರೌಢಶಾಲೆ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಪಾಲಿಟೆಕ್ನಿಕ್‍ಗೆ ಬೇಟಿ

ನೀರ್ಕೆರೆ ಪ್ರೌಢಶಾಲೆ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಪಾಲಿಟೆಕ್ನಿಕ್‍ಗೆ ಬೇಟಿ

ಮೂಡುಬಿದಿರೆಯ ಅಶ್ವಥ್ಥಪುರ ಸಮೀಪದ ನೀರ್ಕೆರೆ ಪ್ರೌಢಶಾಲೆಯ ಎನ್.ಎಸ್.ಎಸ್ ಘಟಕದ ಸುಮಾರು 51 ವಿದ್ಯಾರ್ಥಿಗಳು ತಮ್ಮ ಎನ್.ಎಸ್.ಎಸ್ ಚಟುವಟಿಕೆಯ ಒಂದು ದಿನದ ಶಿಬಿರದ ಅಂಗವಾಗಿ ಮೂಡುಬಿದಿರೆಯ ಎಸ್.ಎನ್.ಎಂ ಪಾಲಿಟೆಕ್ನಿಕ್‍ಗೆ ದಿನಾಂಕ 10-3-2021 ರಂದು   ಬೇಟಿ ನೀಡಿದರು.ಈ ಶಿಬಿರದಲ್ಲಿ ಸುಮಾರು 3 ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಮೊದಲ ಅವಧಿಯಲ್ಲಿ ಎಸ್.ಎನ್.ಎಂ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರಾದ ಶ್ರೀ ಜೆ.ಜೆ.ಪಿಂಟೋರವರು “ಜೀವನ ಕೌಶಲ್ಯ” ದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ನಂತರ ಎರಡನೇ ಅವಧಿಯಲ್ಲಿ ಪಾಲಿಟೆಕ್ನಿಕ್‍ನ ಎನ್.ಎಸ್.ಎಸ್ ಘಟಕ 1ರ ಕಾರ್ಯಕ್ರಮಾಧಿಕಾರಿ ಶ್ರೀ ರಾಮ್‍ಪ್ರಸಾದ್ ಇವರು “ನಾಯಕತ್ವ ರೂಪಿಸುವಲ್ಲಿ ಎನ್.ಎಸ್.ಎಸ್ ನ ಪಾತ್ರ” ಈ ವಿಷಯದ ಬಗ್ಗೆ ಮಾಹಿತಿ ನೀಡಿದರು, ಬಳಿಕ ಕೊನೆಯ ಅವಧಿಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪಾಲಿಟೆಕ್ನಿಕ್ ಸಂಸ್ಥೆಯ ವಿವಿಧ ಪ್ರಯೋಗಾಲಯಗಳಿಗೆ ಬೇಟಿ ನೀಡಿ ತಾಂತ್ರಿಕ ವಿಷಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಕಾರ್ಯಕ್ರಮಕ್ಕೆ ನಮ್ಮ ಪಾಲಿಟೆಕ್ನಿಕ್ ನ ಆಡಳಿತ ಮಂಡಳಿಯ ಆಧ್ಯಕ್ಷರು ಹಾಗು ಮಾಜಿ ಸಚಿವರಾದ ಶ್ರೀ ಕೆ. ಅಭಯಚಂದ್ರ ಜೈನ್ ಆಗಮಿಸಿ ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು.

ವಿದ್ಯಾರ್ಥಿಗಳೊಂದಿಗೆ ಪ್ರೌಢಶಾಲೆಯ ದೈಹಿಕ ಶಿಕ್ಷಕರು ಹಾಗು ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಸುನೀಲ್ ಮಿರಾಂದ , ಶಿಕ್ಷಕರಾದ ಶ್ರೀಮತಿ ಸಲ್ಮಾ, ಶ್ರೀಮತಿ ಭಾಗ್ಯವತಿ ಇವರು ಆಗಮಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರೌಢಶಾಲೆಯ ಎನ್.ಎಸ್.ಎಸ್ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ ಶಿಬಿರದ ಬಗ್ಗೆ , ಮಾಹಿತಿ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು . ಆಗಮಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್ ಸಂಸ್ಥೆಯ ವತಿಯಂದ ಪಾನೀಯ ಹಾಗು ಊಟದ ವ್ಯವಸ್ಥೆಯನ್ನು ಮಾಡಲಾಯಿತು.

ಪಾಲಿಟೆಕ್ನಿಕ್‍ನ ಎನ್.ಎಸ್.ಎಸ್  ಘಟಕ 2ರ ಕಾರ್ಯಕ್ರಮಾಧಿಕಾರಿ ಕಿರಣ್ ವೈ,  ಘಟಕ 1 ಹಾಗು 2ರ ವಿಧ್ಯಾರ್ಥಿ ನಾಯಕರಾದ ಸೌರಭ್, ಶರ್ಮಿತ್ , ಸ್ವಾತಿ , ಹೇಮಂತ್ , ಸಂಪತ್, ಭವ್ಯ , ಶರತ್ , ತ್ರಿಶಾಂತ್ , ಅಪೇಕ್ಷಾ , ವರ್ಷಿತ್ ಹಾಗು ಆದೀಶ್ ಉಪಸ್ಥಿತರಿದ್ದರು.